ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಮೈದುಂಬಿದ ಕಣಕಟ್ಟೆ ಹೋಬಳಿ ಕೆರೆಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಂದ ಬಾಗಿನ ಅರ್ಪಣೆ
ವರದಿಗಾರರು : ಕೆ ಜಿ ಸುರೇಶ್ | ಸ್ಥಳ : ಹಾಸನ | ದಿನಾಂಕ : 21-11-2025

ಮೈದುಂಬಿದ ಕಣಕಟ್ಟೆ ಹೋಬಳಿ ಕೆರೆಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಂದ ಬಾಗಿನ ಅರ್ಪಣೆ

ವನವಳ್ಳಿ ಏತ ನೀರಾವರಿ ಯೋಜನೆ ಫಲವಾರಿಯಾಗಿ; “ಜನಸೇವೆಯೇ ನನ್ನ ಹಂಬಲ” – ಶಾಸಕ ಅರಸೀಕೆರೆ: ಬಯಲುಸೀಮೆ ರೈತರ ಬದುಕು ನೀರು ಮತ್ತು ವಿದ್ಯುತ್ ಪೂರೈಕೆಯಿಂದಲೇ ಬದಲಾಗುತ್ತದೆ ಎಂದು ತಿಳಿಸಿದ್ದಾರೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ. ವನವಳ್ಳಿ ಏತ ನೀರಾವರಿ ಯೋಜನೆಯ ಫಲವಾಗಿ ಮೈದುಂಬಿಕೊಂಡಿರುವ ಕಣಕಟ್ಟೆ ಹೋಬಳಿಯ ಕೆರೆಗಳಿಗೆ ಶುಕ್ರವಾರ ಅವರು ಬಾಗಿನ ಅರ್ಪಿಸಿದರು. ಹೊಳಲ್ಕೆರೆ, ಹರಳಕಟ್ಟ, ಡಿ.ಎಂ.ಕುರ್ಕೆ, ಚಿಕ್ಕೊಂಡಿಹಳ್ಳಿ, ಮಾಡಾಳು, ಸಾತನಗೆರೆ ಹಾಗೂ ಕಣಕಟ್ಟೆ ಸೇರಿದಂತೆ ಅನೇಕ ಕೆರೆಗಳು ಈಗ ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿವೆ. ಇದನ್ನು ಕಂಡು ತೃಪ್ತಿಯಿಂದ ಮಾತನಾಡಿದ ಶಾಸಕರು, “ಹೇಮಾವತಿ ಮೂಲದಿಂದ ಪ್ರತ್ಯೇಕ ಕೊಳವೆ ಕಲ್ಪಿಸಬೇಕೆಂಬ ಹೋರಾಟವನ್ನು ನಾನು ಸದನದ ಒಳಗೂ ಹೊರಗೂ ನಡೆಸಿದ ಪರಿಣಾಮ, ಇಂದು ಈ ಭಾಗಕ್ಕೆ ಸಮೃದ್ಧ ನೀರು ತಲುಪುತ್ತಿದೆ,” ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಎಂ.ಎಸ್.ವಿ. ಸ್ವಾಮಿ ಮಾತನಾಡಿ, “ವನವಳ್ಳಿ ಏತ ನೀರಾವರಿ ಸಾಕಾರಗೊಳ್ಳಲು ಶಾಸಕರ ಹೋರಾಟವೇ ಮುಖ್ಯ ಕಾರಣ. ಈ ಯೋಜನೆ ಕಣकಟ್ಟೆ ಹೋಬಳಿಗೆ ನಿಜವಾದ ವರದಾನದಂತಾಗಿದೆ,” ಎಂದರು. ಈ ಯೋಜನೆಯಿಂದ ಅಂತರ್ಜಲ ಹೆಚ್ಚಳವಾಗಲಿದ್ದು, ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿರುವ ರೈತರಿಗೂ ದೊಡ್ಡ ನೆರವಾಗಲಿದೆ. ಸಂಗ್ರಹಿತ ನೀರಿನ ಸದುಪಯೋಗಕ್ಕಾಗಿ ಹೆಚ್ಚುವರಿ ಕೃಷಿ ಪಂಪ್‌ಸೆಟ್ ವ್ಯವಸ್ಥೆ ಮಾಡಲು ಶಾಸಕರು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಹೇಮಾವತಿ ಜಲಾಶಯ ಯೋಜನೆಯ ಎಇಇ ನಾಗಭೂಷಣ, ರಾಂಪುರ ಗ್ರಾ.ಪಂ. ಅಧ್ಯಕ್ಷ ಸುರೇಶ್, ಡಿ.ಎಂ. ಕುರ್ಕೆ ಸೊಸೈಟಿ ಅಧ್ಯಕ್ಷ ಸುರೇಶ್, ಚನ್ನಬಸಪ್ಪ, ಮಾಜಿ ತಾ.ಪಂ. ಅಧ್ಯಕ್ಷ ನಂಜುಂಡಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಶಾಸಕರ ಮನದಾಳದ ಮಾತು “ನನಗೆ ಅಧಿಕಾರದ ಲಾಲಸೆ ಇಲ್ಲ. ಅವಕಾಶ ಸಿಕ್ಕರೆ ಜನಸೇವೆ ಮಾಡಲು ಸದಾ ಸಿದ್ದ. ಜನರ ಆಶೀರ್ವಾದ ಇದ್ದರೆ ಮಂತ್ರಿ ಸ್ಥಾನ ಕೂಡ ನನಗೆ ಒಲಿಯಬಹುದು. ಅವಕಾಶ ದೊರೆತರೆ ಅರಸೀಕೆರೆಯನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ದೃಢಪ್ರಯತ್ನ ಮಾಡುತ್ತೇನೆ,” ಎಂದು ಶಾಸಕರು ಹೃದಯದ ಮಾತು ಹಂಚಿಕೊಂಡರು.

ಇತರೆ ಸುದ್ದಿಗಳು

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 1063+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 1241+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 1262+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 1341+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 3820+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 4301+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 4339+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 9534+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 9656+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 9933+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 9954+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 23922+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 26960+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 26980+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 27009+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 30013+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 30018+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 30140+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 30235+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 30267+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 35810+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 35899+

ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ....

Views : 36040+

ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ! ಗರಿ ಗೆದರಿದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ...

Views : 41071+