ಚುನಾವಣೆ ಪ್ರಚಾರದ ನಡುವೆ ದೋಣಿ ವಿಹಾರ ನಡೆಸಿದ ಮೋದಿ...!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿದರು. ಪ್ರಧಾನಿಯವರು ಸೂರ್ಯೋದಯದ ಸಮಯದಲ್ಲಿ ಹೂಗ್ಲಿ ನದಿಯ ದಡದಲ್ಲಿ ಸಮಯ ಕಳೆದರು. ಮರದ ದೋಣಿಯಲ್ಲಿ ಕುಳಿತು ಕೈಯಲ್ಲಿ ಕ್ಯಾಮರಾ ಹಿಡಿದು ನದಿಯ ಸೌಂದರ್ಯವನ್ನು ಸೆರೆಹಿಡಿದರು. ಪ್ರಸಿದ್ಧ ಹೌರಾ ಸೇತುವೆ ಮತ್ತು ವಿದ್ಯಾಸಾಗರ್ ಸೇತು ದೃಶ್ಯಗಳನ್ನು ಅವರು ಈ ಸಂದರ್ಭದಲ್ಲಿ ಕಣ್ತುಂಬಿಕೊಂಡರು. ಗಂಗಾ ಮಾತೆಗೆ ನಮನ: ಬಂಗಾಳಿಗರ ಆತ್ಮದಲ್ಲಿ ಗಂಗೆ ಹರಿಯುತ್ತದೆ ಎಂದು ಬಣ್ಣಿಸಿದ ಮೋದಿ, ನದಿಯ ದಡದಲ್ಲಿ ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದರು. ವಿಹಾರದ ವೇಳೆ ಸ್ಥಳೀಯ ದೋಣಿ ಚಾಲಕರು ಮತ್ತು ಬೆಳಗಿನ ವಾಯುವಿಹಾರಕ್ಕೆ ಬಂದಿದ್ದ ಜನರೊಂದಿಗೆ ಮೋದಿ ಸಂವಾದ ನಡೆಸಿದರು. ಒಬ್ಬ ದೋಣಿ ಚಾಲಕನಿಗೆ ಅಪ್ಪಿಕೊಂಡು ಆತ್ಮೀಯತೆ ಮೆರೆದರು ಮತ್ತು ಸುಮಾರು ಒಂದು ಗಂಟೆಯ ಪ್ರಯಾಣಕ್ಕೆ ₹1,000 ಬಾಡಿಗೆ ಪಾವತಿಸಿದರು. ಸೂರ್ಯ ಉದಯಿಸುವ ಸಮಯದಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ಪ್ರಧಾನಿ ಮೋದಿ ವಿಹಾರಕ್ಕೆ ಹೊರಟಿರುವ ಚಿತ್ರಗಳನ್ನು ಅವರೇ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ 92.88ರಷ್ಟು ಮತದಾನ ದಾಖಲಾಗಿತ್ತು. ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಮರದ ದೋಣಿಯ ಮೇಲೆ ಕ್ಯಾಮರಾ ಹಿಡಿದು ಕುಳಿತಿರುವುದನ್ನು ಕಾಣಬಹುದು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದು ಕೆಲವೇ ಗಂಟೆಗಳ ಬಳಿಕ ಪ್ರಧಾನಿ ಮೋದಿ ಕೋಲ್ಕತ್ತಾದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ್ದಾರೆ. ಸೂರ್ಯ ಉದಯಿಸುವ ಸಮಯದಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ಪ್ರಧಾನಿ ಮೋದಿ ವಿಹಾರಕ್ಕೆ ಹೊರಟಿರುವ ಚಿತ್ರಗಳನ್ನು ಅವರೇ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ 92.88ರಷ್ಟು ಮತದಾನ ದಾಖಲಾಗಿತ್ತು. ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಮರದ ದೋಣಿಯ ಮೇಲೆ ಕ್ಯಾಮರಾ ಹಿಡಿದು ಕುಳಿತಿರುವುದನ್ನು ಕಾಣಬಹುದು.