ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹೊಸ ಮೈಲಿಗಲ್ಲು ಸೃಷ್ಟಿಸಿದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ
ವರದಿಗಾರರು : ಮಮತ | ಸ್ಥಳ : Bengaluru | ದಿನಾಂಕ : 06-01-2026

ಹೊಸ ಮೈಲಿಗಲ್ಲು ಸೃಷ್ಟಿಸಿದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಅಜ್ಜನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರು ಪಾಕ್-ಪ್ರಸಾದದ ಘಮಲು 2026ರ ಮಹಾರಥೋತ್ಸವದ ಈ ಸಂಭ್ರಮಕ್ಕೆ ಈ ಬಾರಿ ವಿಶೇಷ ಮೆರುಗು ತಂದಿದೆ.

ಜಾತ್ರೆ ಎಂದರೆ ಅದು ಗವಿಸಿದ್ದಪ್ಪನ ಜಾತ್ರೆ ಎಂಬ ಮಾತನ್ನು ಈ ಬಾರಿಯೂ ಭಕ್ತರು ಸಾಬೀತುಪಡಿಸಿದ್ದಾರೆ. 2026ರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಉತ್ತರ ಪ್ರದೇಶದ ಕುಂಭಮೇಳದಂತೆ ಜನಸಾಗರವೇ ಹರಿದು ಬಂದಿತ್ತು. ವಿಶೇಷವೆಂದರೆ ಕೊಪ್ಪಳದವರೇ ಆದ, ಮೇಘಾಲಯ ರಾಜ್ಯಪಾಲ ಹೆಚ್.ಸಿ. ವಿಜಯಶಂಕರ್ ಅವರು ಧ್ವಜಾರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ 'ಗವಿಸಿದ್ದೇಶ್ವರ ಮಹಾರಾಜ್ ಕೀ ಜೈ' ಎಂಬ ಘೋಷಣೆ ಮುಗಿಲು ಮುಟ್ಟಿತು. ಸುಮಾರು 8 ರಿಂದ 10 ಲಕ್ಷ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಾಜ್ಯಪಾಲ ವಿಜಯಶಂಕರ್ ಅವರು ತಮ್ಮ ಭಾಷಣದಲ್ಲಿ, "ನನ್ನ ತವರು ಜಿಲ್ಲೆಯ ಈ ಭಕ್ತಿ ಪರಾಕಾಷ್ಠೆ ಕಂಡು ಧನ್ಯನಾದೆ" ಎಂದು ಭಾವುಕರಾದರು.

ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸರಿಸುಮಾರು 25 ಲಕ್ಷ ಜೋಳದ ರೊಟ್ಟಿ, 20‌ ಲಕ್ಷ ಮೈಸೂರು ಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಯಗಳನ್ನ ಖುದ್ಧು ಭಕ್ತರೇ ವ್ಯವಸ್ಥೆ ಮಾಡಿದ್ದರು.

ಸಮಾಜಮುಖಿ ಕಳಕಳಿಯ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಕಳಕಳಿಯ ಸಂದೇಶ ಸಾರಿದೆ. 'ಪರಿಸರ ಸಂರಕ್ಷಣೆ ಮತ್ತು ಜಲ ಜಾಗೃತಿ'ಯ ಘೋಷಣೆಗಳೊಂದಿಗೆ ಸಾಗಿದ ಈ ಜಾತ್ರೆ, ಆಧುನಿಕ ಕಾಲದಲ್ಲೂ ಸಂಪ್ರದಾಯ ಮತ್ತು ಸಮಾಜಸೇವೆಯ ಸಂಕೇತವಾಗಿದೆ.

ಜಿಲ್ಲಾಡಳಿತ ಹಾಗೂ ಮಠದ ಸ್ವಯಂಸೇವಕರು ಶಿಸ್ತಿನ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಅಜ್ಜನ ಪಾದಸ್ಪರ್ಶ ಮಾಡಿ, ಮಹಾಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.

ಗವಿಸಿದ್ದೇಶ್ವರ ಜಾತ್ರೆ ಜನಸಂಖ್ಯೆ, ಭಕ್ತಿ ಮತ್ತು ದಾಸೋಹದ ವಿಚಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಗವಿಸಿದ್ದಪ್ಪನ ಆಶೀರ್ವಾದ ನಾಡಿನ ಜನತೆಯ ಮೇಲೆ ಸದಾ ಇರಲಿ ಎಂಬ ಹಾರೈಕೆಯೊಂದಿಗೆ ಈ ಬಾರಿಯ ಮಹೋತ್ಸವ ಸಂಪನ್ನಗೊಂಡಿದೆ

ಇತರೆ ಸುದ್ದಿಗಳು

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 1063+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 1241+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 1262+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 1341+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 3820+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 4301+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 4339+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 9534+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 9656+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 9933+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 9954+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 23922+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 26960+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 26980+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 27009+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 30013+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 30018+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 30140+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 30235+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 30267+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 35810+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 35899+

ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ....

Views : 36040+

ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ! ಗರಿ ಗೆದರಿದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ...

Views : 41071+