ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

 ಮಗಳ ಮೇಲಿನ ಅ*ತ್ಯಾಚಾರಕ್ಕೆ ತಾಯಿಯ ಭೀಕರ ಪ್ರತಿಕಾರ! ಕಾಮುಕನ ಜ*ನನಾಂಗ ಕತ್ತರಿಸಿದ್ದ ತಾಯಿ ಈಗ ದೋಷಮುಕ್ತ!
ವರದಿಗಾರರು : Shobha jagadish | ಸ್ಥಳ : Bangalore | ದಿನಾಂಕ : 15-04-2026

ಮಗಳ ಮೇಲಿನ ಅ*ತ್ಯಾಚಾರಕ್ಕೆ ತಾಯಿಯ ಭೀಕರ ಪ್ರತಿಕಾರ! ಕಾಮುಕನ ಜ*ನನಾಂಗ ಕತ್ತರಿಸಿದ್ದ ತಾಯಿ ಈಗ ದೋಷಮುಕ್ತ!

​ಬ್ರೆಜಿಲ್: ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎನ್ನುವವರಿಗೆ ಈ ತೀರ್ಪು ಹೊಸ ಚರ್ಚೆ ಹುಟ್ಟುಹಾಕಿದೆ. ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಕಾಮುಕನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ ತಾಯಿಯನ್ನು ನ್ಯಾಯಾಲಯ ಈಗ 'ನಿರಪರಾಧಿ' ಎಂದು ಘೋಷಿಸಿದೆ. ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ನಡೆದ ಈ ಘಟನೆ ಮತ್ತು ಈಗ ಬಂದಿರುವ ತೀರ್ಪು ಜಾಗತಿಕ ಮಟ್ಟದಲ್ಲಿ ವೈರಲ್ ಆಗುತ್ತಿದೆ. ​2025ರ ಮಾರ್ಚ್‌ನಲ್ಲಿ ಎರಿಕಾ ಪೆರೇರಾ ಎಂಬ ಮಹಿಳೆಯ ಬದುಕೇ ಬದಲಾಗಿತ್ತು. ತನ್ನ ಮಗಳ ಕೋಣೆಯಿಂದ ಕೇಳಿಬಂದ ಕಿರುಚಾಟ ಕೇಳಿ ಓಡಿ ಹೋದ ಎರಿಕಾಗೆ ಕಂಡಿದ್ದು ನರಕದ ದೃಶ್ಯ. ಆಕೆಯ ಗೆಳೆಯ ಎವರ್ಟನ್ ಅಮರೊ ಎಂಬಾತ 11 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದ.​ಮಗಳ ಮೇಲಿನ ಈ ದೌರ್ಜನ್ಯ ಸಹಿಸದ ತಾಯಿ ಆ ಕ್ಷಣವೇ ರಣಚಂಡಿಯಾಗಿದ್ದಾಳೆ... ಕಾಮುಕನಿಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ, ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, ಕಾಮುಕನ ಜನನಾಂಗವನ್ನು ಕತ್ತರಿಸಿ ಹಾಕಿ, ಮೃತದೇಹವನ್ನು ಸುಟ್ಟು ಹಾಕಿದ್ದಾಳೆ.ಕೃತ್ಯದ ಬಳಿಕ ತಾನೇ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ​ಈ ಕೊಲೆ ಪೂರ್ವಯೋಜಿತ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ, ಮಾರ್ಚ್ 24, 2026 ರಂದು ತೀರ್ಪು ನೀಡಿದ ನ್ಯಾಯಾಧೀಶರು, ಆಕೆ ಮಾಡಿದ್ದು ತನ್ನ ಮಗಳ ಕಾನೂನುಬದ್ಧ ರಕ್ಷಣೆಗಾಗಿ ಎಂಬ ವಾದವನ್ನು ಪುರಸ್ಕರಿಸಿದ್ದಾರೆ. ಎಲ್ಲಾ ಆರೋಪಗಳಿಂದ ಎರಿಕಾಳನ್ನು ಮುಕ್ತಗೊಳಿಸಿರುವ ನ್ಯಾಯಾಲಯ, ಆಕೆಯನ್ನು ಬಿಡುಗಡೆ ಮಾಡಿದೆ. ​ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಿಕಾ ಪರ ಬ್ಯಾಟ್ ಬೀಸುತ್ತಿದ್ದಾರೆ.ಆಕೆ ಕೇವಲ ನಿರ್ದೋಷಿಯಲ್ಲ, ಆಕೆ ಒಬ್ಬ ರಿಯಲ್ ಹೀರೋ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇದು ಅಪರಾಧವಲ್ಲ, ಇದು ತಾಯಿ ನೀಡಿದ ನೈಜ ನ್ಯಾಯ ಎಂದು ಸಾವಿರಾರು ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ​ಭಾರತದಂತಹ ದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ವರ್ಷಗಟ್ಟಲೆ ನಡೆಯುತ್ತಿರುವಾಗ, ಬ್ರೆಜಿಲ್ ನ್ಯಾಯಾಲಯದ ಈ ಕ್ಷಿಪ್ರ ಮತ್ತು ಕಠಿಣ ಸಂದೇಶ ನೀಡುವ ತೀರ್ಪು ಈಗ ಎಲ್ಲೆಡೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇತರೆ ಸುದ್ದಿಗಳು

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 1063+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 1241+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 1262+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 1341+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 3820+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 4301+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 4339+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 9534+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 9656+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 9933+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 9954+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 23922+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 26960+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 26980+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 27009+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 30013+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 30018+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 30140+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 30235+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 30267+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 35810+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 35899+

ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ....

Views : 36040+

ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ! ಗರಿ ಗೆದರಿದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ...

Views : 41071+