ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?
ಕ್ರಿಕೆಟಿಗ ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರವನ್ನು ಹಾಡಿ ಹೊಗಳಿದ ನಂತರ, ಸಿನಿಮಾ ಕಲೆಕ್ಷನ್ ಹೆಚ್ಚಿದೆ ಎಂಬ ಚರ್ಚೆ ಶುರುವಾಗಿದೆ. ಥಿಯೇಟರ್‌ನಲ್ಲಿ ನೂಕು ನುಗ್ಗಲಿನ ವೈರಲ್ ವಿಡಿಯೋ ಸಹ ಹರಿದಾಡಿತು. ಆದರೆ, ಕೊಹ್ಲಿ ಪೋಸ್ಟ್ ನಂತರ ಸಂಗ್ರಹದಲ್ಲಿ ಅಷ್ಟೇನೂ ಗಮನಾರ್ಹ ಏರಿಕೆ ಆಗಿಲ್ಲ. ವೈರಲ್ ವಿಡಿಯೋ ಹಳೆಯದಾಗಿರಬಹುದು ಎಂದು ಹೇಳಲಾಗುತ್ತಿದೆ.ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಏನೇ ಮಾಡಿದರೂ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇತ್ತೀಚೆಗೆ ಅವರು ‘ಧುರಂಧರ್ 2’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಆದಿತ್ಯ ಧಾರ್ ನಿರ್ದೇಶನ, ರಣವೀರ್ ಸಿಂಗ್ ನಟನೆ ಸೇರಿ ಎಲ್ಲದಕ್ಕೂ ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಅದ್ಭುತ ಎಂದಿದ್ದರು. ಇದಾದ ಬಳಿಕ ಸಿನಿಮಾ ಹೌಸ್ಫುಲ್ ಕಾಣುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ, ಸಿನಿಮಾದ ಕಲೆಕ್ಷನ್ ಹೆಚ್ಚಿದೆಯೇ ? ಧುರಂಧರ್ 2 ಸಿನಿಮಾ ವಿಶ್ವ ಮಟ್ಟದಲ್ಲಿ 1652 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಚಿತ್ರದ ಗ್ರಾಸ್ ಕಲೆಕ್ಷನ್ 1653 ರೂಪಾಯಿ. ಈ ಚಿತ್ರದ ನೆಟ್ ಕಲೆಕ್ಷನ್ 1,041 ಕೋಟಿ ರೂಪಾಯಿ. ಈವರೆಗೆ ಸಿನಿಮಾ ಸುಮಾರು 4 ಲಕ್ಷ ಶೋಗಳನ್ನು ರನ್ ಮಾಡಿದೆ. ಈ ಸಿನಿಮಾ ಕಳೆದ ಭಾನುವಾರ 30 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೊಹ್ಲಿ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದು ಸೋಮವಾರ ಸಂಜೆ. ಸೋಮವಾರ ಚಿತ್ರದ ಗಳಿಕೆ 12 ಕೋಟಿ ರೂಪಾಯಿ ಇತ್ತು. ಮಂಗಳವಾರ ಚಿತ್ರದ ಕಲೆಕ್ಷನ್ ತಗ್ಗಿಲ್ಲ. ಬದಲಿಗೆ 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬುಧವಾರ ಸಿನಿಮಾದ ಕಲೆಕ್ಷನ್ 9.46 ಕೋಟಿ ರೂಪಾಯಿಗೆ ಇಳಿದಿದೆ. ಇದನ್ನು ಹೋಲಿಕೆ ಮಾಡಿದರೆ ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಕೊಹ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸಿರಬಹುದು ಎನ್ನಬಹುದು. ಆದರೆ, ಗಳಿಕೆಯಲ್ಲಿ ಗಮನಾರ್ಹ ಏರಿಕೆ ಏನೂ ಆಗಿಲ್ಲ.
ಇತರೆ ಸುದ್ದಿಗಳು