ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ
ಜಾಮ್‌ನಗರ : ಆರ್ ಆರ್ ನಗರದ ರಾಜರಾಜೇಶ್ವರಿ ದೇವಾಲಯ, ಶ್ರೀ ಕೈಲಾಶ ಆಶ್ರಮದಲ್ಲಿ ಅನಂತ್ ಅಂಬಾನಿ ಪರವಾಗಿ ವಿಶೇಷ ಸಂಕಲ್ಪ ಪೂಜೆ ಕೈಕರ್ಯಗಳು ಆಯೋಜನೆ ಮಾಡಲಾಗಿದ್ದು, ಶ್ರೀ ಕೈಲಾಶ ಆಶ್ರಮ ಮಹಾಸಂಸ್ಥಾನ ಪರಮಪೂಜ್ಯ ಜಗದ್ಗುರು ಆಚಾರ್ಯ ಮಹಾಮಂಡಳೇಶ್ವರ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಷ್ಠಿತ ಉದ್ಯಮಿಯ ಮಗ ಅನಂತ್ ಅಂಬಾನಿ ಅವರ ಜನ್ಮದಿನಾಚರಣೆಗೆ ಜಾಮ್‌ನಗರದಲ್ಲಿಸಕಲ ಸಿದ್ದತೆಗಳು ಭರದಿಂದ ಸಾಗುತಿದೆ . ಬಾಲಿವುಡ್ ಸ್ಟಾರ್‌ಗಳು, ಖ್ಯಾತ ಉದ್ಯಮಿಗಳು ಮುಕೇಶ್ ಅಂಬಾನಿ ಅವರ ಪುತ್ರನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಆಗಮಿಸುತ್ತಿದ್ದಾರೆ. ಅತ್ತ ಅನಂತ್ ಅಂಬಾನಿ ಅವರ ಬರ್ತ್‌ಡೇ ಹಿನ್ನೆಲೆ ದೇಶದ ಮೂಲೆ ಮೂಲೆಯಲ್ಲಿ ಪೂಜೆ ಪುನಸ್ಕಾರಗಳು, ಸಮಾಜ ಸೇವೆ ಕೈಂಕರ್ಯಗಳು ನಡೆಯುತ್ತಿವೆ. ಈತನ್ಮಧ್ಯೆ, ಬೆಂಗಳೂರಿನ ಪ್ರಸಿದ್ಧ ರಾಜರಾಜೇಶ್ವರಿ ದೇವಾಲಯದ ಬಳಿ ಇರುವ ಶ್ರೀ ಕೈಲಾಸ ಆಶ್ರಮದಲ್ಲಿ ಕೂಡ ಅನಂತ್ ಅಂಬಾನಿ ಮತ್ತು ಅಂಬಾನಿ ಕುಟುಂಬದ ಶ್ರೇಯೋಭಿವೃದ್ಧಿಗೆ ಹಾರೈಕೆ ಮಾಡಲಾಗಿದೆ. ಬಡರೋಗಿಗಳಿಗೆ ಆರ್ಥಿಕ ಸಹಾಯ ಘೋಷಿಸಿದ ಅನಂತ್ ಅಂಬಾನಿ ಅವರ ಕಾರ್ಯಕ್ಕೆ ಗಂಗಾ ಸ್ಪೈನ್ ಇಂಜುರಿ ಫೌಂಡೇಷನ್ ಶ್ಲಾಘನೆ ವ್ಯಕ್ತಪಡಿಸಿದೆ .ರಾಜರಾಜೇಶ್ವರಿ ದೇವಾಲಯದ ಬಳಿ ಇರುವ ಶ್ರೀ ಕೈಲಾಸ ಆಶ್ರಮದಲ್ಲಿ ಸಂಸ್ಕೃತ ಪಾಠಶಾಲಾ ಪಾರಂಗತರಿಂದ ಅನಂತ್ ಅಂಬಾನಿ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗಿದ್ದು, ಶ್ರೀ ಕೈಲಾಸ ಆಶ್ರಮ ಸಂಸ್ಕೃತ ಪಾಠಶಾಲಾ ಪಾರಂಗತರಿಂದ ಶುಭಾಶಯ ಸಲ್ಲಿಸಲಾಗಿದೆ. ಈ ವೇಳೆ ಆಶ್ರಮದ ಗೋಶಾಲೆಯಲ್ಲಿ ಗೋವುಗಳಿಗೆ ದೇವಿ ಮುಂದೆ ಪೂಜೆ ಸಲ್ಲಿಸಲಾಗಿದೆ.
ಇತರೆ ಸುದ್ದಿಗಳು