ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?
ಮುಂಬೈ: ಯುದ್ಧದ ನಡುವೆಯೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಿಂದಾಗಿ ಹಲವು ದೇಶಗಳು ಭಾರೀ ಸಂಕಷ್ಟಕ್ಕೆ ಒಳಗಾಗಿದೆ. ಯುದ್ಧದಿಂದ ಸಮುದ್ರ ಮಾರ್ಗಗಳು ಅತ್ಯಂತ ಅಪಾಯಕಾರಿಯಾಗಿರುವ ಸಮಯದಲ್ಲಿ ಭಾರತಕ್ಕೆ ಒಂದು ದೊಡ್ಡ ಮತ್ತು ಸಮಾಧಾನಕರ ಸುದ್ದಿ ಬಂದಿದೆ. ಅಡುಗೆ ಅನಿಲ ಸಾಗಿಸುತ್ತಿದ್ದ ಭಾರತೀಯ ಹಡಗು ಗ್ರೀನ್ ಆಶಾ ಸುರಕ್ಷಿತವಾಗಿ ನವಿ ಮುಂಬೈ ಬಂದರನ್ನು ತಲುಪಿದೆ. ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಗುರುವಾರ, ಏಪ್ರಿಲ್ 09,2026 ರಂದು ಈ ಮಾಹಿತಿ ನೀಡಿದೆ. ಹಡಗು 15,400 ಟನ್ ಅಡುಗೆ ಅನಿಲ ಸಾಗಿಸುತ್ತಿತ್ತು. ಇದು ಯುದ್ಧದಿಂದಾಗಿ ತುಂಬಾ ಉದ್ವಿಗ್ನತೆ ತುಂಬಿದ್ದ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತ ತಲುಪಿದ ಮೊದಲ ಭಾರತೀಯ ಹಡಗು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗು ಗ್ರೀನ್ ಆಶಾ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜಂಟಿಯಾಗಿ ನಿರ್ವಹಿಸುವ ಜವಾಹರಲಾಲ್ ನೆಹರು ಬಂದರಿನಲ್ಲಿ ಸುರಕ್ಷಿತವಾಗಿ ನಿಂತಿದೆ. ಹಡಗಿನಲ್ಲಿದ್ದ ಎಲ್ಲಾ ನೌಕರರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತರಾಗಿದ್ದಾರೆ. ಹಡಗಿಗೆ ಅಥವಾ ಸರಕಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಂದರು ಪ್ರಾಧಿಕಾರ ತಿಳಿಸಿದೆ. ಇದು ಯುದ್ಧದ ಮಧ್ಯೆ ಭಾರತಕ್ಕೆ ಸಿಕ್ಕ ಒಂದು ದೊಡ್ಡ ಶುಭಸುದ್ದಿಯಾಗಿದೆ.
ಇತರೆ ಸುದ್ದಿಗಳು