ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್ ಹಾರ್ಮುಜ್ !
ಟೆಹ್ರಾನ್: ಅನುಮತಿ ಪಡೆಯದೇ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಯಾವುದೇ ಹಡಗನ್ನು ನಾಶಪಡಿಸಲಾಗುವುದು ಎಂದು ಇರಾನ್ ಹೊಸದಾಗಿ ಎಚ್ಚರಿಕೆ ನೀಡಿದೆ. ಅಮೆರಿಕ-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತು, ಹಾರ್ಮುಜ್ ಜಲಸಂಧಿ ತೆರೆಯಿತು ಎಂದು ಖುಷಿಪಟ್ಟಿದ್ದವರಿಗೆ, ಇರಾನ್‌ನ ಹೊಸ ನಿರ್ಧಾರ ಬರಸಿಡಿಲಿನಂತೆ ಬಂದೆರಗಿದೆ. ಅನುಮತಿ ಪಡೆಯದೇ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಯಾವುದೇ ಹಡಗನ್ನು ನಾಶಪಡಿಸಲಾಗುವುದು ಎಂದು ಇರಾನ್ ಹೊಸದಾಗಿ ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿ ದಾಟಲು ಈಗಲೂ ಅನುಮತಿ ಕಡ್ಡಾಯ ಎಂದು ಇರಾನ್ ಸ್ಪಷ್ಟಪಡಿಸಿದ್ದು, ಇದು ಮತ್ತೆ ಬಿಕ್ಕಟ್ಟನ್ನು ಉಲ್ಬಣಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.ಟೆಹ್ರಾನ್: ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಜಾರಿ ಆಗಿದ್ದರಿಂದ ಸಂತಸದಲ್ಲಿ ತೇಲಾಡುತ್ತಿದ್ದ ಜಗತ್ತಿಗೆ, ಇರಾನ್ ಹಾರ್ಮುಜ್ ಶಾಕ್ ನೀಡಿದೆ. ಕದನ ವಿರಾಮ ಒಪ್ಪಂದದಂತೆ ಹಾರ್ಮುಜ್ ಜಲಸಂಧಿ ತೆರೆಯುವುದಾಗಿ ಹೇಳಿದ್ದ ಇರಾನ್, ಈಗ ಈ ಜಲಸಂಧಿ ದಾಟಲು ಈಗಲೂ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದೆಹೌದು, ಪರವಾನಗಿ ಪಡೆಯದೇ ಹಾರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುವ ಯಾವುದೇ ವಾಣೀಜ್ಯ ಹಡಗಿನ ಮೇಲೆ ದಾಳಿ ಮಾಡುವುದಾಗಿ ಇರಾನ್ ಹೊಸದಾಗಿ ಎಚ್ಚರಿಕೆ ನೀಡಿದೆ. ಈ ಕುರಿತು ರೇಡಿಯೋ ಮೂಲಕ ಹಡಗುಗಳಿಗೆ ಎಚ್ಚರಿಕೆ ಬಿಡುಗಡೆ ಮಾಡಿರುವ ಇರಾನ್ ನೌಕಾಪಡೆ, ಜಲಸಂಧಿಯನ್ನು ದಾಟುವ ಮೊದಲು ಪರವಾನಗಿ ಪತ್ರ ತೋರಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.ವಿಧಿಸುವ ಇರಾನ್ ನಿರ್ಧಾರದ ಬಗ್ಗೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, "ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಟೋಲ್ ವಿಧಿಸುವ ಕುರಿತು ಇರಾನ್ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ" ಎಂದು ಸ್ಪಷ್ಟಪಡಿಸಿದೆ.
ಇತರೆ ಸುದ್ದಿಗಳು