ಬಿಗ್ ಬಾಸ್ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ರೋಮ್ಯಾನ್ಸ್ ವಿಡಿಯೋ ವೈರಲ್ ...
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ, ನದಿ ತೀರದಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದಿದ್ದ ಈ ಜೋಡಿ, ಈಗ ಮದುವೆಯ ಬಗ್ಗೆ ಪರೋಕ್ಷ ಸುಳಿವು ನೀಡಿದೆ. ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರ. ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಈಗಲೂ ಗಟ್ಟಿಯಾಗುತ್ತಲೇ ಸಾಗಿದೆ.ಇದೀಗ ಇವರಿಬ್ಬರೂ ನದಿ ತೀರದಲ್ಲಿ ಮೈಚಳಿ ಬಿಟ್ಟು ಭರ್ಜರಿ ರೊಮಾನ್ಸ್ ಮಾಡಿದ್ದಾರೆ. ಸಾಗರಿಯೇ, ಸಾಗರಿಯೇ ಹಾಡಿಗೆ ಇಬ್ಬರೂ ಸಕತ್ ಸ್ಟೆಪ್ ಹಾಕಿದ್ದು ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದು, ಬೇಗ ಗುಡ್ನ್ಯೂಸ್ ಕೊಡಿ ಎಂದು ಕೇಳುತಿದ್ದಾರೆ .
ಇತರೆ ಸುದ್ದಿಗಳು