ಎಂಗೇಜ್ ಮೆಂಟ್ ಆಯ್ತು: ತಕ್ಷಣವೇ ಮದುವೆ ಮಾಡಬೇಡಿ ! ನಟಿ ಅನುಪಮಾ ಗೌಡ
ಬೆಂಗಳೂರು: ನಿರೂಪಕಿ ಅನುಪಮಾ ಗೌಡ ಅವರು ಬಹುಕಾಲದ ಗೆಳೆಯ ರಾಘವ್ ಅನು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಕುರಿತು ಹರಿದಾಡುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಸ್ವತಃ ಅನುಪಮಾ ಅವರೇ ಈಗ ತೆರೆ ಎಳೆದಿದ್ದಾರೆ. ಒಂದು ಸೀಕ್ರೆಟ್‌ನ ಶೇರ್ ಮಾಡಬೇಕಿತ್ತು. ಹಾಗಾಗಿ, ಈ ವಿಡಿಯೋವನ್ನ ಮಾಡ್ತಾ ಇದ್ದೀನಿ. ಸಾಮಾನ್ಯವಾಗಿ ನಾನು ರಿಯಾಕ್ಟ್ ಮಾಡಲ್ಲ. ಬೆಳಗ್ಗೆಯಿಂದಲೂ ಶೂಟಿಂಗ್ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ಸ್ ಹೇಳೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್ ಹೇಳ್ತಾ ಇದ್ದಾರೆ. ಏನು ಅಂತಂದರೆ, ಎರಡು ದಿನದ ಹಿಂದೆ ನನ್ನ ಎಂಗೇಜ್‌ಮೆಂಟ್ ಆಯ್ತು. ನನ್ನ ಬೆಸ್ಟ್‌ಫ್ರೆಂಡ್ ರಾಘವ್ ಅವರ ಜೊತೆಗೆ. ಅನ್‌ಫಾರ್ಚುನೇಟ್ಲಿ ನಮ್ಮ ಎಂಗೇಜ್‌ಮೆಂಟ್‌ಗೆ ನಾವು ಅಟೆಂಡ್ ಮಾಡೋಕಾಗಲಿಲ್ಲ. ಯಾಕೆಂದರೆ, ನಮಗೆ ಯಾರೂ ಕೂಡ ಇನ್ಪಾರ್ಮ್ ಮಾಡಲಿಲ್ಲ ನಮ್ಮ ಎಂಗೇಜ್‌ಮೆಂಟ್ ಅಂತ ಎಂದು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಒಂದಷ್ಟು ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ನನ್ನ ಬರ್ತ್‌ಡೇಗೆ ಅಂತ ಪೋಸ್ಟ್ ಮಾಡಿದ್ದ ಫೋಟೋಗಳನ್ನ ತಗೊಂಡು ಇವರಿಬ್ಬರದ್ದು ಎಂಗೇಜ್‌ಮೆಂಟ್ ಆಯ್ತು. ಅನುಪಮಾ ಬಾಯ್‌ಫ್ರೆಂಡ್ ಹಾ ಇವರು? ಅನುಶ್ರೀ ಅವರ ಮದುವೆಯಾಯ್ತು, ಈಗ ಅನುಪಮಾ ಎಂಗೇಜ್‌ಮೆಂಟ್ ಆಗಿದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ .
ಆದರೆ, ನನಗೆ ಬೇಜಾರಾಗಿದ್ದು ಏನಂತಂದರೆ, ಇಷ್ಟೆಲ್ಲಾ ಇರ್ಬೇಕಾದರೆ ಅಂದರೆ, AI ಎಲ್ಲಾ ಇರ್ಬೇಕಾದರೆ, ನಾವು ಇಷ್ಟೆಲ್ಲಾ ಮುಂದುವರೆದಿರಬೇಕಾದರೆ, ಅಟ್‌ಲೀಸ್ಟ್ ಒಂದೊಳ್ಳೆ ಫೋಟೋವನ್ನ ಕ್ರಿಯೇಟ್ ಮಾಡಿ, ರಿಂಗ್ ಹಾಕೋ ತರಹ ಫೋಟೋವನ್ನ ಎಡಿಟ್ ಮಾಡಿ, ನಮಗೆ ಕಂಗ್ರ್ಯಾಜುಲೇಷನ್ಸ್ ಅಂತ ವಿಷಸ್ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು. ಆದರೆ, ಇನ್ನೂ ಟೈಮ್ ಇದೆ ಎಂದು ಕೌಂಟರ್ ನೀಡಿದ್ದಾರೆ ಅನುಪಮಾ.
ಇತರೆ ಸುದ್ದಿಗಳು