ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

“ಕಂಪನಿ ಪರ ಗ್ರಾಮಸ್ಥರ ಏಕತೆ: 10 ಹಳ್ಳಿಗಳಿಂದ ತಹಸೀಲ್ದಾರ್‌ರಿಗೆ ಮನವಿ”
ವರದಿಗಾರರು : ಈ.ಮಂಜುನಾಥ | ಸ್ಥಳ : ಹೊಸಪೇಟೆ | ದಿನಾಂಕ : 25-11-2025

“ಕಂಪನಿ ಪರ ಗ್ರಾಮಸ್ಥರ ಏಕತೆ: 10 ಹಳ್ಳಿಗಳಿಂದ ತಹಸೀಲ್ದಾರ್‌ರಿಗೆ ಮನವಿ”

ಎಸ್‌.ಎಲ್‌.ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ವಿರುದ್ಧ ಕರ್ನಾಟಕ ಮಹಾ ಜನಸೇನೆ ಸಂಘ ಇತ್ತೀಚೆಗೆ ನಡೆಸಿದ ಮುಷ್ಕರವನ್ನು ಕಟುವಾಗಿ ಖಂಡಿಸಿರುವ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕಂಪನಿಗೆ ಬೆಂಬಲ ಸೂಚಿಸಿದ್ದಾರೆ. ಸುಮಾರು 400ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಒಂದೇ ವೇದಿಕೆಯಲ್ಲಿ ಸೇರಿಕೊಂಡು ತಮ್ಮ ಅಭಿಪ್ರಾಯವನ್ನು ಆಡಳಿತದ ಮುಂದೆ ವ್ಯಕ್ತಪಡಿಸಿದರು. ಗ್ರಾಮಸ್ಥರು ತಮ್ಮ ಮನವಿಯಲ್ಲಿ, “ಮಹಾ ಜನಸೇನೆ ಸಂಘದ ಮುಷ್ಕರ ಅನಗತ್ಯ. ಇದು ಗ್ರಾಮಸ್ಥರ ಜೀವನೋಪಾಯಕ್ಕೆ ಧಕ್ಕೆ ತರಲಿದೆ,” ಎಂದು ಹೇಳಿದ್ದಾರೆ.

ಕಂಪನಿ ಹಲವು ವರ್ಷಗಳಿಂದ ಉದ್ಯೋಗ, ಕುಡಿಯುವ ನೀರು, ರಸ್ತೆ, ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಸಿಎಸ್‌ಆರ್ ಚಟುವಟಿಕೆಗಳ ಮೂಲಕ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದನ್ನು ಅವರು ಸ್ಪಷ್ಟಪಡಿಸಿದರು. “ಕಾರ್ಖಾನೆ ಇರುವುದರಿಂದ ಸಾವಿರಾರು ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಯಾವುದೇ ಸಮಸ್ಯೆ ಇದ್ದರೆ ಮನವಿ ಮಾಡಿದರೆ ತಕ್ಷಣ ಪರಿಹಾರ ನೀಡಲಾಗುತ್ತಿದೆ. ಕೆಲವರ ವೈಯಕ್ತಿಕ ಹಿತಾಸಕ್ತಿ ಆಧರಿಸಿದ ಬೇಡಿಕೆಗಾಗಿ ಮುಷ್ಕರ ಮಾಡುವುದು ಅಸಮಂಜಸ,” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಂಪನಿಯ ವಿರುದ್ಧ ನಡೆಯುತ್ತಿರುವ ಮುಷ್ಕರಕ್ಕೆ ಪರ್ಯಾಯವಾಗಿ, ಕಂಪನಿಯ ಬೆಂಬಲಕ್ಕಾಗಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಬೇಕು ಎಂದು ಅವರು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೀಮತಿ ಕವಿತಾ ಅವರು, ವಿಷಯವನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುತ್ತಿದ್ದು, ಕಾನೂನುಸಮ್ಮತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಕಡೆ ಈಗ ಗ್ರಾಮಸ್ಥರ ಕಣ್ಣು ನೆಟ್ಟಿವೆ.

ಇತರೆ ಸುದ್ದಿಗಳು

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 1063+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 1241+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 1262+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 1341+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 3820+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 4301+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 4339+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 9534+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 9656+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 9933+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 9954+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 23922+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 26960+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 26980+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 27009+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 30013+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 30018+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 30140+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 30235+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 30267+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 35810+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 35899+

ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ....

Views : 36040+

ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ! ಗರಿ ಗೆದರಿದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ...

Views : 41071+