ಸೌಂದರ್ಯ ಸ್ಪರ್ಧೆ ನಡೆಯುವಾಗ ಸುಂದರಿಯ ಕಳಚಿ ಬಿದ್ದ ಹಲ್ಲು...!
ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆ ಯಲ್ಲಿ ಸುಂದರಿಯ ಕಳಚಿ ಬಿದ್ದ ಹಲ್ಲು . ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಕೇವಲ ರೂಪವಷ್ಟೇ ಅಲ್ಲ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವೂ ಅತಿ ಮುಖ್ಯ. ಆದರೆ ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ‘ಮಿಸ್ ಗ್ರ್ಯಾಂಡ್ ಥೈಲ್ಯಾಂಡ್’ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಸುಂದರಿಯೊಬ್ಬಳ ಹಲ್ಲುಗಳು ಕಳಚಿ ಬಿದ್ದ ಅಪರೂಪದ ಮತ್ತು ಮುಜುಗರದ ಪ್ರಸಂಗವೊಂದು ಜರುಗಿದೆ. ಘಟನೆಯ ವಿವರ ಹೀಗಿದೆ, ಕಮಲವಾನ್ ಚನಾಗೋ ಎಂಬ ಸುಂದರಿ ತೀರ್ಪುಗಾರರ ಮುಂದೆ ನಿಂತು, ಆತ್ಮವಿಶ್ವಾಸದಿಂದ ಮಾತನಾಡಲು ಬಾಯಿ ತೆರೆದಿದ್ದಾರೆ. ಆದರೆ ಮಾತನಾಡಲು ಶುರುಮಾಡುತ್ತಿದ್ದಂತೆಯೇ ಆಕೆಯ ಬಾಯಲ್ಲಿದ್ದ ಹಲ್ಲುಗಳು ವೇದಿಕೆಯ ಮೇಲೆ ಉದುರಿ ಬಿದ್ದಿವೆ. ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಮತ್ತು ತೀರ್ಪುಗಾರರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಇಪ್ಪತ್ತರ ಹರೆಯದ ಈ ಸುಂದರಿ ಆಗಲೇ ಹಲ್ಲುಸೆಟ್ಟು ಹಾಕಿಸಿಕೊಂಡಿದ್ದಾಳೆಯೇ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಅಸಲಿ ವಿಷಯವೇನೆಂದರೆ, ಸೌಂದರ್ಯ ಹೆಚ್ಚಿಸಿಕೊಳ್ಳಲು ಅವರು ತಮ್ಮ ಹಲ್ಲುಗಳಿಗೆ ‘ವೆನಿಯರ್ಸ್’ಎಂಬ ಕೃತಕ ಹಲ್ಲಿನ ಕವಚವನ್ನು ಅಳವಡಿಸಿಕೊಂಡಿದ್ದರು. ಸರಿಯಾಗಿ ಫಿಕ್ಸ್ ಆಗದ ಕಾರಣ, ಆಕೆ ಮಾತನಾಡಲು ಹೋದಾಗ ಆ ಕವಚಗಳು ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ .
ಇತರೆ ಸುದ್ದಿಗಳು