ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ "ಹುತಾತ್ಮ" ಮಗನಿಗೆ ಚಳಿಯಾಗಬಾರದೆಂದು ಕಂಬಳಿ ಹೊದಿಸಿದ ತಾಯಿ
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 10-01-2026

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ "ಹುತಾತ್ಮ" ಮಗನಿಗೆ ಚಳಿಯಾಗಬಾರದೆಂದು ಕಂಬಳಿ ಹೊದಿಸಿದ ತಾಯಿ

ತಾಯಿಯ ಪ್ರೀತಿಗೆ ಸಾವು-ನೋವುಗಳ ಹಂಗಿಲ್ಲ ಎಂಬುದನ್ನು ಜಮ್ಮುವಿನ ಈ ಘಟನೆ ಮತ್ತೊಮ್ಮೆ ಜಗತ್ತಿಗೆ ಸಾರಿದೆ. ಜಮ್ಮುವಿನ ಆರ್.ಎಸ್. ಪುರ ಪ್ರದೇಶದ ನಿವಾಸಿ ಜಸ್ವಂತ್ ಕೌರ್ ಎಂಬುವವರು, ತಮ್ಮ ಹುತಾತ್ಮ ಮಗನ ಪ್ರತಿಮೆಗೆ ಚಳಿಯಿಂದ ರಕ್ಷಣೆ ನೀಡಲು ಕಂಬಳಿ ಹೊದಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಕಣ್ಣುಗಳನ್ನು ತೇವಗೊಳಿಸಿದೆ.

ಘಟನೆಯ ವಿವರ: ಬಿಎಸ್‌ಎಫ್ ಕಾನ್ಸ್ಟೆಬಲ್ ಆಗಿದ್ದ ಗುರ್ನಾಮ್ ಸಿಂಗ್, 2016ರಲ್ಲಿ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಅವರ ನೆನಪಿಗಾಗಿ ಗ್ರಾಮದ ಅಸ್ಸಿ ಚೌಕ್‌ನಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಜಮ್ಮುವಿನಲ್ಲಿ ಈಗ ತೀವ್ರವಾದ ಚಳಿ ಆವರಿಸಿದ್ದು, ತಮ್ಮ ಮಗನಿಗೆ ಚಳಿಯಾಗುತ್ತಿರಬಹುದು ಎಂಬ ಕಳಕಳಿಯಿಂದ ತಾಯಿ ಜಸ್ವಂತ್ ಕೌರ್ ಅವರು ಮನೆ ಮುಚ್ಚುವ ಮುನ್ನ ಪ್ರತಿಮೆಯ ಬಳಿ ಬಂದು ಅದಕ್ಕೆ ದಪ್ಪನೆಯ ಕಂಬಳಿಯನ್ನು ಪ್ರೀತಿಯಿಂದ ಹೊದಿಸಿದ್ದಾರೆ.

ತಾಯಿಯ ಕಣ್ಣೀರಿನ ನುಡಿ: “ನಾನೊಬ್ಬ ತಾಯಿ. ಈ ಕಡು ಚಳಿಯಲ್ಲಿ ನಾವು ಬಿಸಿಬಿಸಿ ಮನೆಯಲ್ಲಿದ್ದರೂ ನಡುಗುತ್ತೇವೆ. ಹಾಗಿರುವಾಗ ಮಗನನ್ನು ಈ ಚಳಿಯಲ್ಲಿ ಒಂಟಿಯಾಗಿ ಬಿಡುವುದು ಹೇಗೆ? ಆ ಪ್ರತಿಮೆ ಬರೀ ಕಲ್ಲಲ್ಲ, ಅದು ನನ್ನ ಜೀವಂತ ಮಗ” ಎಂದು ಜಸ್ವಂತ್ ಕೌರ್ ಹೇಳುತ್ತಿದ್ದರೆ ಕೇಳುವವರ ಎದೆ ಭಾವುಕತೆಯಿಂದ ಭಾರವಾಗುತ್ತದೆ. ನೆರೆಹೊರೆಯವರ ಪ್ರಕಾರ, ಈ ತಾಯಿ ಪ್ರತಿದಿನ ಪ್ರತಿಮೆಯ ಬಳಿ ಬಂದು ಮಗನೊಂದಿಗೆ ಮಾತನಾಡುತ್ತಾರೆ.

ಹುತಾತ್ಮ ಗುರ್ನಾಮ್ ಸಿಂಗ್ ಸಾಧನೆ: 173ನೇ ಬೆಟಾಲಿಯನ್‌ನಲ್ಲಿದ್ದ ಗುರ್ನಾಮ್ ಸಿಂಗ್, 2016ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನಿ ಸ್ನೈಪರ್ ದಾಳಿಯನ್ನು ಎದುರಿಸಿ ದೇಶಕ್ಕೆ ನುಗ್ಗುತ್ತಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ್ದರು. ಅಂದು ಅವರು ತೋರಿದ ಅಪ್ರತಿಮ ಶೌರ್ಯಕ್ಕಾಗಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಿ ಗೌರವಿಸಲಾಗಿದೆ.

ಇತರೆ ಸುದ್ದಿಗಳು

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 1063+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 1241+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 1262+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 1341+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 3820+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 4301+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 4339+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 9534+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 9656+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 9933+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 9954+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 23922+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 26960+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 26980+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 27009+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 30013+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 30018+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 30140+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 30235+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 30267+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 35810+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 35899+

ಕರ್ನಾಟಕದಲ್ಲಿ ಎಬೋಲಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ....

Views : 36040+

ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ! ಗರಿ ಗೆದರಿದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ...

Views : 41071+