ರಾಮಾಯಣ ಟೀಸರ್ ನೋಡಿ ರಣಬೀರ್ ಪಾತ್ರದ ಹೊಗಳಿದ ಆಲಿಯಾ ಭಟ್
ರಾಮಾಯಣ ಟೀಸರ್ ನೋಡಿ ಆಲಿಯಾ ಭಟ್ ಏನ್ ಹೇಳಿದರು? ರಣಬೀರ್ ಪಾತ್ರದ ಬಗ್ಗೆ ಪತ್ನಿ ಆಲಿಯಾ ಭಟ್ ಅಭಿಪ್ರಾಯವೇನು?ರಾಮಾಯಣ ಚಿತ್ರದ ಟೀಸರ್ ರೀಲೀಸ್ ಆಗಿದೆ . ಇದನ್ನು ನೋಡಿ ಆಲಿಯಾ ಭಟ್ ತುಂಬಾ ಸಂತೋಷ ಪಟ್ಟಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ನೋಡಿ ಹಾಡಿ ಹೊಗಳಿದ್ದಾರೆ .ರಣಬೀರ್ ಕಪೂರ್ ಇಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಬ್ಯೂಟಿಫುಲ್ ಆಗಿದೆ ಎನ್ನುವ ಜೊತೆಗೆ ಈ ಚಿತ್ರದ ಟೀಸರ್ ಬಗ್ಗೆ ಇನ್ನೂ ಹಲವು ವಿಚಾರ ಹೇಳಿದ್ದಾರೆ. ರಣಬೀರ್ ಕಪೂರ್ ಈ ಚಿತ್ರದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಇಡೀ ಚಿತ್ರ ತಂಡವೂ ಒಳ್ಳೆ ಕೆಲಸ ಮಾಡಿದೆ. ಇದನ್ನ ನಾನು ರಾಮ ಯುನಿಟ್ ಅಂತಲೂ ಕರೆಯುತ್ತೇನೆ ಅನ್ನೋದನ್ನು ಆಲಿಯಾ ಇಲ್ಲಿ ಹೇಳಿಕೊಂಡಿದ್ದಾರೆ. ಈ ಒಂದು ಅಭಿಪ್ರಾಯವನ್ನ ವರ್ಚುವಲ್ ಸಂವಾದಲ್ಲಿಯೇ ಆಲಿಯಾ ಭಟ್ ಕೊಟ್ಟಿದ್ದಾರೆ. ಚಿತ್ರದ ರಾಮನ ಫಸ್ಟ್ ಲುಕ್ ಅನ್ನ ಲಾಸ್ ಏಂಜಲೀಸ್ ಅಲ್ಲಿ ರಿಲೀಸ್ ಮಾಡಲಾಗಿದೆ. ಇಲ್ಲಿಯ ಆಯ್ದ ಪ್ರೇಕ್ಷಕರೊಟ್ಟಿಗಿನ ಸಂವಾದದ ಸಮಯದಲ್ಲಿಯೇ ಆಲಿಯಾ ಭಟ್ ತಮ್ಮ ಈ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಇತರೆ ಸುದ್ದಿಗಳು