ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಚಾಮರಾಜನಗರದಲ್ಲಿ ಕಾಡಾನೆ ದಾಳಿ – ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿದ ಘಟನೆ
ವರದಿಗಾರರು : ನಾ.ಅಶ್ವಥ್‌ ಕುಮಾರ್‌ | ಸ್ಥಳ : ಚಾಮರಾಜನಗರ | ದಿನಾಂಕ : 25-11-2025

ಚಾಮರಾಜನಗರದಲ್ಲಿ ಕಾಡಾನೆ ದಾಳಿ – ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿದ ಘಟನೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಜೋಳದ ಫಸಲು ನಾಶವಾದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ಗ್ರಾಮದ ರೈತ ಕದರಯ್ಯ ಅವರ ಅಲ್ಪ ಜಮೀನಿನಲ್ಲಿ ಬೆಳೆದಿದ್ದ ಜೋಳ ಇನ್ನೇನು ಕಟಾವಿಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿ ಸುಮಾರು ಅರ್ಧ ಎಕರೆಯಷ್ಟು ಬೆಳೆ ತಿಂದು ನಾಶಪಡಿಸಿದೆ. ಬೆಳೆ ಮಾತ್ರವಲ್ಲದೆ ಜಮೀನಿನ ಸುತ್ತಲೂ ಅಳವಡಿಸಿದ್ದ ಕಲ್ಲು–ಕಂಬ ಮೆಸ್‌ಗೂ ಕಾಡಾನೆ ಹಾನಿ ಮಾಡಿದ್ದು, ರೈತನಿಗೆ ಹೆಚ್ಚುವರಿ ನಷ್ಟ ಉಂಟಾಗಿದೆ.

“ನಮಗೆ ಬೆಳೆ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು” ಸ್ಥಳಕ್ಕೆ ಬಂದಿದ್ದ ಅರಣ್ಯ ಅಧಿಕಾರಿಗಳಿಗೆ ಕದರಯ್ಯ ಹಾಗೂ ಸ್ಥಳೀಯ ರೈತ ಪರ ಸಂಘಟನೆಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪ್ರತಿ ವರ್ಷ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಬೆಳೆ ಹಾನಿಯಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕಾಡಾನೆ ದಾಳಿ ತಡೆಯಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವವರೆಗೆ ಸ್ಥಳ ಪರಿಶೀಲನೆ ಬೇಡ” ಎಂದು ರೈತರು ತಿಳಿಸಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಕ್ರಮ ಜರುಗದಿರುವುದರಿಂದ ಅಸಮಾಧಾನಗೊಂಡ ರೈತರು ಅಧಿಕಾರಿಗಳಿಗೆ ಪರಿಶೀಲನೆಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಪ್ಪ, ಎಂ.ಟಿ. ದೊಡ್ಡಿ ಶ್ರೀನಿವಾಸ್, ಮುರುಗೇಶ್, ಕದರಯ್ಯ, ಭದ್ರ, ರಮೇಶ್ ಹಾಗೂ ಹಲವರು ಹಾಜರಿದ್ದರು.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1092+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4140+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4181+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4238+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4340+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4388+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4420+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4464+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4512+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4525+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4599+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4659+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6879+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6942+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6993+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7049+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7210+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7238+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7368+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7549+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9752+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9917+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9978+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10149+