ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 6 ಮೂಕಜೀವಗಳು ಬಲಿ..!
ಹಾಸನ : ಬೆಂಗಳೂರಿನ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿರೋ ಹಸುಗಳ ಶೆಡ್ನಲ್ಲಿ ಭಾರೀ ದುರಂತ ಸಂಭವಿಸಿದೆ. ಫ್ಲೈವುಡ್ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿ ಹಸುಗಳ ಶೆಡ್ಗೂ ವ್ಯಾಪಿಸಿದೆ. ಬೆಂಗಳೂರಿನ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 6 ಮೂಕಜೀವಗಳು ಬಲಿಯಾಗಿರುವ ಘಟನೆ ನಡೆದಿದೆ. ತಡರಾತ್ರಿ ಹಸುಗಳಿದ್ದ ಶೆಡ್ನ ಪಕ್ಕದ ಫ್ಲೈವುಡ್ ಅಂಗಡಿಗೆ ಬೆಂಕಿಬಿದ್ದಿದ್ದು, ಕ್ಷಣಮಾತ್ರದಲ್ಲೇ ಬೆಂಕಿ ಶೆಡ್ಗೂ ಆವರಿಸಿದೆ. ಶೆಡ್ನಲ್ಲಿದ್ದ 20 ಜಾನುವಾರುಗಳ ಪೈಕಿ 6 ಹಸುಗಳು ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿರೋ ಹಸುಗಳ ಶೆಡ್ನಲ್ಲಿ ಭಾರೀ ದುರಂತ ಸಂಭವಿಸಿದೆ. ಫ್ಲೈವುಡ್ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿ ಹಸುಗಳ ಶೆಡ್ಗೂ ವ್ಯಾಪಿಸಿದೆ. ಈ ಶೆಡ್ನಲ್ಲಿ ಒಟ್ಟು 20 ಹಸುಗಳಿದ್ದವು ಎನ್ನಲಾಗ್ತಿದೆ. ಇದರಲ್ಲಿ 6 ಹಸುಗಳು ಸಾವನ್ನಪ್ಪಿದ್ದು, 3 ಹಸುಗಳು ಸುಟ್ಟ ಗಾಯಗಳಿಂದ ನರಳುತ್ತಿದೆ. ಬೆಂಕಿಯಲ್ಲಿ ಸಿಲುಕಿದ ಹಸುಗಳ ಕೂಗಾಟ ಕೇಳಿ ತಕ್ಷಣ ಸ್ಥಳೀಯರು ಸ್ಥಳಕ್ಕೆ ದಾವಿಸಿದ್ದು, 14 ಹಸುಗಳನ್ನ ರಕ್ಷಣೆ ಮಾಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ನಾಲ್ಕು ಅಗ್ನಿ ಶಾಮಕ ವಾಹಗಳು ಬೆಂಕಿ ನಂದಿಸುವ ಕಾರ್ಯ ನಡೆಸಿ ಯಶಸ್ವಿಯಾಗಿದೆ. ಇದೇ ವೇಳೆ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತರೆ ಸುದ್ದಿಗಳು