ಮೈಸೂರು ರೈಲ್ವೆ ಮಾರ್ಗದಲ್ಲಿ ಏಪ್ರಿಲ್ 15ರವರೆಗೆ ಸಂಚಾರ ವ್ಯತ್ಯಯ!
ಮೈಸೂರು: ನೀವೇನಾದರೂ ಮುಂದಿನ ವಾರ ರೈಲಿನಲ್ಲಿ ಎಲ್ಲಾದರೂ ಹೋಗಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನೋಡಿ ಯಾಕಂದರೆ, ಮೈಸೂರು ಭಾಗದ ರೈಲು ಸಂಚಾರದಲ್ಲಿ ಭಾರಿ ಬದಲಾವಣೆಗಳಾಗಿವೆ ನೀವು ಹೋಗಬೇಕಾದ ರೈಲು ನಿಗದಿತ ಸಮಯಕ್ಕೆ ಬರದೆ ನಿಮ್ಮ ಇಡೀ ದಿನವೇ ಹಾಳಾಗುವ ಸಾಧ್ಯತೆಯಿದೆ. ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯಿಂದ ಬಂದಿರುವ ಅಧಿಕೃತ ಮಾಹಿತಿಯ ಪ್ರಕಾರ, ಮೈಸೂರು ಭಾಗದ ಪ್ರಮುಖ ರೈಲು ಮಾರ್ಗಗಳಲ್ಲಿ ದೊಡ್ಡ ಮಟ್ಟದ 'ಸುರಕ್ಷತಾ ಕಾಮಗಾರಿ' ನಡೆಯುತ್ತಿದೆ. ಹಳಿಗಳ ಸುರಕ್ಷತೆ ಮತ್ತು ಪ್ರಯಾಣಿಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಈ ತುರ್ತು ನಿರ್ವಹಣಾ ಕೆಲಸ ಅನಿವಾರ್ಯವಾಗಿದೆ. ಆದರೆ ಇದರ ನೇರ ಹೊಡೆತ ಬೀಳುತ್ತಿರುವುದು ಸಾಮಾನ್ಯ ಪ್ರಯಾಣಿಕರ ಮೇಲೆ.ವಾಸ್ಕೋ-ಡ-ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ (17310): ಏಪ್ರಿಲ್ 7 ರಿಂದ 14 ರವರೆಗೆ ಈ ರೈಲು ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ತಡವಾಗಿ ಸಂಚರಿಸಲಿದೆ. ತಾಳಗುಪ್ಪ – ಕೆಎಸ್‍ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652): ಏಪ್ರಿಲ್ 8 ರಿಂದ 15 ರವರೆಗೆ ಬೆಂಗಳೂರಿಗೆ ಹೋಗುವ ಈ ರೈಲು ಕೂಡ 40 ನಿಮಿಷ ವಿಳಂಬವಾಗಲಿದೆ. ಕೇವಲ ಈ ಎರಡು ರೈಲುಗಳಲ್ಲದೆ, ಈ ಮಾರ್ಗದಲ್ಲಿ ಸಂಚರಿಸುವ ಇನ್ನೂ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಏರುಪೇರಾಗುವ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ನೀವು ಆಫೀಸ್‍ಗೆ ಹೋಗುವವರಾಗಲಿ ಅಥವಾ ತುರ್ತು ಕೆಲಸಕ್ಕೆ ಹೋಗುವವರಾಗಲಿ, ಈ 40 ನಿಮಿಷದ ವಿಳಂಬ ನಿಮ್ಮ ಮುಂದಿನ ಕನೆಕ್ಟಿಂಗ್ ಬಸ್ ಅಥವಾ ಕೆಲಸಕ್ಕೆ ತೊಂದರೆಯಾಗಬಹುದು.
ಇತರೆ ಸುದ್ದಿಗಳು