7ವರ್ಷದ ಬಾಲಕನ ಮೇಲೆ ಹರಿದ ಗೂಡ್ಸ್ ವಾಹನ ...!
ಮನೆ ಎದುರಿನ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕನ ಮೇಲೆ ಇಂದು ಮದ್ಯಾನ ಗೂಡ್ಸ್ ವಾಹನ ಹರಿದು ತೀವ್ರಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಶಬ್ಬೀರ್ ನಗರದ ನಿವಾಸಿ ಫಾಜಿಲ್ ಅಹಮದ್ ಹಾಗೂ ಅಸ್ಮಿಯಾಬಾನು ದಂಪತಿಗಳ ಪುತ್ರ ಮಹಮದ್ ರಿಯಾನ್ 7 ವರ್ಷ ಸಾವನ್ನಪ್ಪಿದಾತ. ಬಾಲಕ ಮಹಮದ್ ರಿಹಾನ್ ಮನೆ ಎದುರಿನಲ್ಲಿ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಮನೆಯಲ್ಲೇ ಇದ್ದ ಪೆÇೀಷಕರು ತಕ್ಷಣವೇ ತೀವ್ರಗಾಯಗೊಂಡಿದ್ದ ಬಾಲಕನನ್ನು ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಶಬ್ಬೀರ್ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿದರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್.ಐ ತಾಜುದ್ದಿನ್ ತಿಳಿಸಿದ್ದಾರೆ.
ಇತರೆ ಸುದ್ದಿಗಳು